IMG-20240815-WA0009

NewsKarkala Report : ಫೆ. 10 -11 : ಅಷ್ಟೋತ್ತರಶತ ನಾರಿಕೇಳ ಶ್ರೀ ಮಹಾಗಣಪತಿ ಯಾಗ

ಹಿರಿಯಡಕ ಪಂಚನಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾದಲ್ಲಿ ಅಷ್ಟೋತ್ತರಶತ ನಾರಿಕೇಳ ಶ್ರೀ ಮಹಾಗಣಪತಿ ಯಾಗ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಫೆ.10-11ರಂದು ನಡೆಯಲಿದೆ.

ಫೆ.10ರಂದು ಬೆಳಗ್ಗೆ 9ಗಂಟೆಗೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗುರು ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹವಾಚನ ದೇವನಾಂದಿ, ಕೌತುಕ ಬಂಧನ, ಆಚಾರ್ಯವರಣ, ಸಪ್ತಶತಿ ಪಾರಾಯಣ ದುರ್ಗಾ ಹೋಮ, ಪವಮಾನ ಹೋಮ, ಪಂಚಾಮೃತ ಅಭಿಷೇಕ ನಡೆಯಲಿದೆ. ಸಂಜೆ 4 ಗಂಟೆಗೆ ಮಂಟಪ ಸಮಸ್ಕಾರ, ಪ್ರಧಾನ ಕಲಶ ಪ್ರತಿಷ್ಠೆ ಮಂಡಲಾಧನೆ, ಕುಂಡ ಸಂಸ್ಕಾರ, ಅರಣಿ ಮಥನ, ಅಗ್ನಿ ಜನನ, ಉಪಚಾರ ಪೂಜೆ, ಅಷ್ಟಾವಧಾನ ನಡೆಯಲಿದೆ.

ಫೆ.11ರಂದು ಬೆಳಗ್ಗೆ 7 ಯಜ್ಞ ಸಂಕಲ್ಪ, 8ಗಂಟೆಗೆ ಯಜ್ಞಾರಂಭ, ಸಹಸ್ರನಾಮ ದೂರ್ವಾಚನೆ, ಕುಂಕುಮಾರ್ಚನೆ, 11 ಗಂಟೆಗೆ ಮಹಾಪೂರ್ಣಾಹುತಿ, 12 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಮಹಾ ಅನ್ನಸಂತರ್ಪಣೆ ಮತ್ತು ನಿರಂತರ ಭಜನಾ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಫೆ.11ರಂದು ಸಂಜೆ 6ರಿಂದ ಸಾಂಸ್ಕೃತಿಕ ವೈಭವ ನಡೆಯಲಿದ್ದು, ರಾತ್ರಿ 8ಗಂಟೆಗೆ ಸನ್ನಿಧಿ ಕಲಾವಿದರು ಉಡುಪಿ ಅಭಿನಯಿಸುವ ರವಿಕುಮಾರ್ ಕಡೆಕಾರ್ ಸಾಹಿತ್ಯ ಸಂಭಾಷಣೆ ಮತ್ತು ನಿರ್ದೇಶನದ ಅಪ್ಪೆ ಮಂತ್ರದೇವತೆ ತುಳು ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.

Tags: No tags

Add a Comment

Your email address will not be published. Required fields are marked *