About us
who WE ARE
ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆ (ರಿ.)
ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯು ಧಾರ್ಮಿಕ ಚಟುವಟಿಕೆಗಳಿಗೆ ಉನ್ನತ ಮಟ್ಟದ ವೇಧಿಕೆಯಾಗಿ ನಿಂತಿದೆ. ಸಾಮುದಾಯಿಕ ಪ್ರಾರ್ಥನೆಗಳು, ಭಜನೆಗಳು, ಸಾಂಸ್ಕೃತಿಕ ಆಚರಣೆಗಳು, ಪ್ರವಚನಗಳು, ಓದುವಿಕೆ ಮತ್ತು ಧ್ಯಾನವನ್ನು ಒಳಗೊಂಡಿದೆ. ಇಲ್ಲಿ ಪ್ರಮುಖವಾಗಿ ಮಹಾ ಶಿವರಾತ್ರಿ , ರಾಮ ನವಮಿ , ಕೃಷ್ಣ ಅಷ್ಟಮಿ ಮತ್ತು ದುರ್ಗಾ ಪೂಜೆ ಸೇರಿದಂತೆ ಪ್ರಮುಖ ಹಿಂದೂ ಹಬ್ಬಗಳನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ.
ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲಾ (ರಿ.) ಪಂಚನಬೆಟ್ಟು ಉಡುಪಿ. ಇದು ಗುರು ಹಿರಿಯರ ಮಾರ್ಗದರ್ಶನದೊಂದಿಗೆ ಜ್ಯೋತಿರ್ವಿದ್ವಾನ್ ಅಜಿತ ಆಚಾರ್ಯರ ಅಧ್ಯಕ್ಷತೆಯಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಉದ್ದೇಶವನ್ನು ಇಟ್ಟುಕೊಂಡು ಪ್ರಾರಂಭವಾಯಿತು.
How it work
ನಮ್ಮ ಪ್ರಮುಖ ಕೈಂಕರ್ಯಗಳು
ಪ್ರತಿ ವರ್ಷವೂ ಲೋಕಕಲ್ಯಾಣಾರ್ಥವಾಗಿ ಪೂಜೆ-ಯಜ್ಞ-ಯಾಗಾಧಿಗಳನ್ನು ಮಾಡಿಕೊಂಡು ಸಮಾಜದ ಕೆಳಸ್ತರ ದಲ್ಲಿರುವ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹ ಕಾರ್ಯವನ್ನು ಮಾಡುತ್ತಾ, ಬಡವರಿಗೆ ಅಶಕ್ತರಿಗೆ ಅನಾರೋಗ್ಯವಂತರಿಗೆ ಆಸರೆಯಾಗುತ್ತಾ, ಕುಶಲಕರ್ಮಿಗಳಿಗೆ ಕಲಾವಿದರಿಗೆ ವಿದ್ಯಾರ್ಥಿಗಳ ಪ್ರಾಮಾಣಿಕ ಪ್ರಯತ್ನಗಳಿಗೆ ಆಧಾರಸ್ತoಭವಾಗಿ ಶ್ರೀ ದುರ್ಗಾಪರಮೇಶ್ವರಿ ಯಜ್ಞಶಾಲೆಯು ಕೆಲಸವನ್ನು ಅವಿರತವಾಗಿ ಮಾಡುತ್ತಿದೆ. ಸ್ವಹಿತಾಸಕ್ತಿಗಳಿರದೆ ಸಮಾಜಕ್ಕೆ ತಾವು ಸಂಪಾದಿಸಿದರಲ್ಲಿ ಏನನ್ನಾದರೂ ನೀಡುವ ಮನೋಧರ್ಮದ, ಪ್ರಾಜ್ಞ ಸಮಾಜ ಕಟ್ಟುವ ಕನಸನ್ನು ನನಸು ಮಾಡುವ ಸುಮನಸ್ಕರ ಸಧೃಡ ಕೂಟವಿದಾಗಿದೆ . ಸಹಕರಿಸುವ ಪ್ರತಿಯೊಬ್ಬರಿಗೂ ನಮನ, ನಮ್ಮೊಂದಿಗೆ ಜೊತೆಯಾಗಲು ಇಚ್ಛಿಸುವವರಿಗೆ ಸದಾ ಸ್ವಾಗತ.
